kenduli
portal

ಪರ್ಮಿಟ್ ರಹಿತ 3 ಟಿಪ್ಪರ್, 7 ಟ್ರ್ಯಾಕ್ಟರ್ ಜಪ್ತಿ

45

ರಾಯಚೂರು.ಜ.09- ಅಕ್ರಮ ಕಂಕರ್ ಮತ್ತು ಮರಳು ಸಾಗಾಣಿಕೆ ಮೇಲೆ ದಾಳಿ ಮಾಡಿದ ಸಹಾಯಕ ಆಯುಕ್ತರು 3 ಟಿಪ್ಪರ್, 7 ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದ ಘಟನೆ ನಡೆಯಿತು.
ಇಂದು ಮುಂಜಾನೆ ಆರ್‌ಟಿಓ ವೃತ್ತದಲ್ಲಿ ಈ ವಾಹನ ಮೇಲೆ ದಾಳಿ ಮಾಡಲಾಯಿತು. ಟಿಪ್ಪರ್ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಕಂಕರ್ ಮತ್ತು ಮರಳು, ಎಂ ಸ್ಯಾಂಡ್ ಸಾಗಿಸಲಾಗುತ್ತಿತ್ತು. ಇದ್ಯಾವ ವಾಹನಕ್ಕೂ ಪರ್ಮಿಟ್ ಇಲ್ಲದಿರುವುದರಿಂದ ಎಲ್ಲಾ ವಾಹನ ಜಪ್ತಿ ಮಾಡಲಾಗಿದೆ. ಮಂತ್ರಾಲಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಹಾಯಕ ಆಯುಕ್ತರಾದ ಶಿಲ್ಪಾ ಶರ್ಮಾ ಮತ್ತು ಪ್ರೊಬೇಷನರಿ ಐಎ‌ಎಸ್ ಅಧಿಕಾರಿ ನವೀನ್ ಭಟ್ ಅವರು ವಾಹನ ತಡೆದು ಪರ್ಮಿಟ್ ನೀಡುವಂತೆ ಕೇಳಿದರು. ಯಾವುದೇ ವಾಹನ ಚಾಲಕರಲ್ಲಿ ಪರ್ಮಿಟ್ ಇಲ್ಲದಿರುವುದರಿಂದ ಎಲ್ಲಾ ವಾಹನಗಳನ್ನು ಜಪ್ತಿ ಮಾಡಿ, ನೇತಾಜಿ ಪೊಲೀಸ್ ಠಾಣೆಗೆ ಕಳುಹಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಹಿರಿಯ ಅಧಿಕಾರಿ ವಿಶ್ವನಾಥ ಉಪಸ್ಥಿತರಿದ್ದರು.

Comments are closed.