kenduli
portal

ಸಚಿವರ ಆರ್​.ವಿ ದೇಶಪಾಂಡೆಯಿಂದ ಬರ ಸಮೀಕ್ಷೆ

26

ಬಾಗಲಕೋಟೆ: ಜಿಲ್ಲೆಯ ಬರ ಪರಿಸ್ಥಿತಿ, ಪರಿಹಾರ ನಿರ್ವಹಣೆ ವೀಕ್ಷಣೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ತಂಡ ಭೇಟಿ ನೀಡಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಬೆಳೆಹಾನಿ ಆದ ಹಿನ್ನೆಲೆ ಸಚಿವರು ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಸಚಿವ ದೇಶಪಾಂಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಬೀಳಗಿ ಶಾಸಕ ಮುರುಗೇಶ ಎಂ ನಿರಾಣಿ ಸಾಥ್ ನೀಡಿದ್ದಾರೆ. ಬಳಿಕ ಸಚಿವ ದೇಶಪಾಂಡೆ, ಶಾಸಕ ಮುರುಗೇಶ ನಿರಾಣಿ ಅವರ ಬೀಳಗಿಯ ನಿವಾಸಕ್ಕೆ ತೆರಳಿದರು.

Comments are closed.