kenduli
portal

ಆಸ್ಪತ್ರೆಯಲ್ಲಿ ಜಟಾಪಟಿ, ವಿಮ್ಸ್ ಆಸ್ಪತ್ರೆಯ ನರ್ಸ್ ಆತ್ಮಹತ್ಯೆಗೆ ಯತ್ನ

27

ಬಳ್ಳಾರಿ:  ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರು ಜಟಾಪಟಿ ನಡೆಸಿದ ಘಟನೆ ನಡೆದಿದೆ.  ಡ್ಯೂಟಿಯಲ್ಲಿರಬೇಕಾದರೆ ಸ್ಟಾಫ್ ಸೂಪರಿಂಟೆಂಡೆಂಟ್ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ನರ್ಸ್​, ಕಿರುಕುಳ ಆರೋಪ ಹಿನ್ನೆಲೆ ಸಂಪತ್ ಕುಮಾರ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆ ನಂತರ ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳಲು ನರ್ಸ್​ ರತ್ನಮ್ಮ ಯತ್ನಿಸಿದ ಘಟನೆ ಕೂಡ ನಡೆದಿದೆ.  ಇನ್ನು ಈ ಕುರಿತು ನರ್ಸ್ ರತ್ನಮ್ಮ ಅವರು ತನಗೆ ಕಿರುಕುಳ ನೀಡಲಾಗಿದೆ ಎಂದು ದೂರು ದಾಖಲಿಸಿದ್ದರೆ, ಸೂಪರಿಂಟೆಂಡೆಂಟ್ ಸಂಪತ್ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ. ಇಂದು ಬೆಳಗ್ಗೆ 9-30 ಕ್ಕೆ  ವಿಮ್ಸ್ ನರ್ಸ್ ಆಡಳಿತ ಕಚೇರಿಯಲ್ಲಿ ಈ ಘಟನೆ ನಡೆದಿದೆ.

Comments are closed.