kenduli
portal

‘ಪರಿಸರ ಇಲಾಖೆ ಕ್ಲಿಯರೆನ್ಸ್​ ಇಲ್ಲದೆ ಸ್ಟೀಲ್​​ ಬ್ರಿಡ್ಜ್​ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ’: ಹೈಕೋರ್ಟ್​​

26

ಬೆಂಗಳೂರು: ಪರಿಸರ ಇಲಾಖೆಯ ಕ್ಲಿಯರೆನ್ಸ್​ ಇಲ್ಲದೇ ಸ್ಟೀಲ್​​ ಬ್ರಿಡ್ಜ್​ ಯೋಜನೆ​ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಬಿಡಿಎಗೆ ಹೈಕೋರ್ಟ್​ ಆದೇಶ ನೀಡಿದೆ. ಹೈಕೋರ್ಟ್​ನಲ್ಲಿಂದು ಸ್ಟೀಲ್​ ಬ್ರಿಡ್ಜ್​​ ನಿರ್ಮಾಣ ಸಂಬಂಧ ವಿಚಾರಣೆ ನಡೆಯಿತು. ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ, ನಮ್ಮ ಬೆಂಗಳೂರು ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಎನ್​ಜಿಟಿ ಆದೇಶದ ವಿರುದ್ಧ ಸರ್ಕಾರ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ‌ ಮುಂದಾಗಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​, ಸ್ಟೀಲ್ ಫ್ಲೈಓವರ್ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಪರಿಸರ ಇಲಾಖೆ ಕ್ಲೀಯರೆನ್ಸ್ ಕಡ್ಡಾಯಗೊಳಿಸಿ 2017ರಲ್ಲಿ ಎನ್​ಜಿಟಿ ಆದೇಶ ನೀಡಿದೆ. ಎನ್​ಜಿಟಿ ಆದೇಶಕ್ಕೆ‌ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಅಂತಾ ನಮ್ಮ ಬೆಂಗಳೂರು ಫೌಂಡೇಶನ್ ಪರ ವಕೀಲ ವಿಜಯ್ ಶಂಕರ್ ವಾದ ಮಂಡಿಸಿದ್ರು.

ಸ್ಟೀಲ್​​ ಬ್ರಿಡ್ಜ್​ ನಿರ್ಮಾಣ ಮಾಡಲು ಪರಿಸರ ಇಲಾಖೆಯ ಕ್ಲಿಯರೆನ್ಸ್​ ಪಡೆದುಕೊಂಡಿದ್ದೀರಾ ಅಂತಾ ಎಜಿ ಉದಯ್ ಹೊಳ್ಳಾಗೆ ಕೋರ್ಟ್ ಪ್ರಶ್ನೆ ಮಾಡಿತು. ‘ಇನ್ನೂ ಯಾವುದೇ ಕ್ಲಿಯರೆನ್ಸ್​ಗೆ ಅರ್ಜಿ ಸಲ್ಲಿಸಿಲ್ಲ’ ಎಂದು ಬಿಡಿಎ ಪರ ವಕೀಲರು ಉತ್ತರ ನೀಡಿದರು. ನಂತರ ಕೋರ್ಟ್​, ಪರಸರ ಇಲಾಖೆ‌ ಕ್ಲಿಯರೆನ್ಸ್ ಪಡೆಯದೇ ಪ್ರಾಜೆಕ್ಟ್​ ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಿ, ವಿಚಾರಣೆಯನ್ನ ಜೂನ್​ಗೆ ಮುಂದೂಡಿತು.

Comments are closed.