kenduli
portal

ಬಂದ್​ ಎಫೆಕ್ಟ್​: ಕೆಎಸ್​ಆರ್​ಟಿಸಿಗೆ ₹7.82 ಕೋಟಿ, ಬಿಎಂಟಿಸಿಗೆ ₹6.5 ಕೋಟಿ ಲಾಸ್​..!

27

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ನಿನ್ನೆ ಮತ್ತು ಇವತ್ತು ಭಾರತ್​ ಬಂದ್​ಗೆ ಕರೆ ನೀಡಿದ್ವು. ಕಾರ್ಮಿಕ ಸಂಘಟನೆಗಳ ಕರೆಗೆ ತಲೆಭಾಗಿದ ಬಿಎಂಟಿಸಿ ಹಾಗೂ ಕೆಎಸ್​​ಆರ್​​ಟಿಸಿ ತಮ್ಮ ಬಸ್​ಗಳನ್ನ ರಸ್ತೆಗೆ ಇಳಿಸಿರಲಿಲ್ಲ. ಬಸ್​ಗಳು ರಸ್ತೆಗೆ ಇಳಿಯದ ಪರಿಣಾಮ ಸಂಸ್ಥೆಗಳು ಭಾರೀ ನಷ್ಟ ಅನುಭವಿಸಿವೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಇಂದು ಕೆಎಸ್​​ಆರ್​ಟಿಸಿಗೆ ಒಟ್ಟು 2.42 ಕೋಟಿ, ಬಿಎಂಟಿಸಿಗೆ 3 ಕೋಟಿ ರೂಪಾಯಿ ನಷ್ಟವಾಗಿದೆ. ಹಾಗೇ ನಿನ್ನೆ ಕೆಎಸ್​​ಆರ್​ಟಿಸಿ ₹5.40 ಕೋಟಿ ನಷ್ಟ, ಬಿಎಂಟಿಸಿ ₹3.5 ಕೋಟಿ ನಷ್ಟ ಅನುಭವಿಸಿತ್ತು. ಒಟ್ಟು ಎರಡು ದಿನ್ ಬಂದ್ ಮಾಡಿದ ಪರಿಣಾಮ ಕೆಎಸ್​​​ಆರ್​ಟಿಸಿಗೆ ಒಟ್ಟು ₹7.82 ಕೋಟಿ ನಷ್ಟ ಅನುಭವಿಸಿದ್ರೆ, ಬಿಎಂಟಿಸಿ ಬೊಕ್ಕಸಕ್ಕೆ 6.5 ಕೋಟಿ ರೂಪಾಯಿ ಲಾಸ್ ಆಗಿದೆ. ಇನ್ನು ಎರಡು ದಿನಗಳಲ್ಲಿ 17 ಕೆಎಸ್​​ಆರ್​​ಟಿಸಿ ಬಸ್​​ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬಸ್​ಗಳ ಹಾನಿಯಿಂದ ಕೆಎಸ್​​ಆರ್​​ಟಿಸಿಗೆ 2 ಲಕ್ಷದ 32 ಸಾವಿರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಇನ್ನು, ಬಿಎಂಟಿಸಿ 58 ಬಸ್ಗಳಿಗೆ ಹಾನಿಯಾಗಿದ್ದು, ಅಂದಾಜು 7.5 ಕೋಟಿ ರೂಪಾಯಿ ನಷ್ಟವಾಗಿದೆ  ಅಂತಾ ಕೆಎಸ್​ಆರ್​ಟಿಸಿ, ಬಿಎಂಟಿಸಿ ಕೇಂದ್ರ ಕಚೇರಿ ತಿಳಿಸಿದೆ.

Comments are closed.