kenduli
portal

ಸಂಕ್ರಾಂತಿಗೆ ‘ಯಜಮಾನ’ ಫಸ್ಟ್‌ ಸಾಂಗ್ ರಿಲೀಸ್..!

64

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಯಜಮಾನ ಸಿನಿಮಾದ ಮೊಟ್ಟ ಮೊದಲ ಹಾಡು ಇದೇ ಸಂಕ್ರಾಂತಿ ಹಬ್ಬ ಅಂದ್ರೆ ಜನವರಿ 15ರಂದು ಡಿ ಬಿಟ್ಸ್ ಯುಟ್ಯೂಬ್‌ ಚಾನೆಲ್​ನಲ್ಲಿ ಬಿಡುಗಡೆಯಾಗಲಿದೆ. ದರ್ಶನ್​ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಜಮಾನ ಚಿತ್ರತಂಡ ಸಾಂಗ್ ಗಿಫ್ಟ್ ನೀಡ್ತಿದೆ. ಶಿವಾನಂದಿ.. ಅನ್ನೋ ಸಾಹಿತ್ಯವಿರೋ ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ರೆ, ಬಹದ್ದೂರ್‌ ಚೇತನ್ ಸಾಹಿತ್ಯ ಬರೆದಿದ್ದಾರೆ.

ಹಾಡುಗಳೇ ಯಜಮಾನನ ಹೈಲೈಟ್!
ಟೈಟಲ್​ ಹಾಗೂ ಫಸ್ಟ್‌ಲುಕ್‌ನಿಂದಲೇ ಕನ್ನಡ ಸಿನಿಪ್ರಿಯರನ್ನ ಪುಳಕಿತಗೊಳಿಸಿರೋ ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟ್ರಟೈನರ್ ಯಜಮಾನ ಚಿತ್ರ. ಹೀಗಾಗಿ ಹಾಡುಗಳೂ ಕೂಡ ಅಷ್ಟೇ ಅದ್ದೂರಿಯಿಂದ ಕೇಳುಗರ ಕಿವಿಗೆ ಇಂಪು ನೀಡಲಿದೆಯಂತೆ.
ಯಜಮಾನ’ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಸಾಂಗ್‌ವೊಂದರ ಚಿತ್ರೀಕರಣ ಸ್ವೀಡನ್‌ನ ಕಣ್ಣುಕೋರೈಸೋ ಸುಂದರ ತಾಣಗಳಲ್ಲಿ ನಡೆದಿದೆ. ಇನ್ನೊಂದು ಹಾಡಿನಲ್ಲಿ ನೂರಾರೂ ಡ್ಯಾನರ್ಸ್ ಜೊತೆಗೆ ದಾಸ ಡ್ಯಾನ್ಸ್ ಮಾಡಿದ್ದಾರೆ. ‘ಶಿವಾನಂದಿ’ ಹಾಡು ಹೇಗಿರಲಿದೆ ಅನ್ನೋದನ್ನ ನೋಡೋಕೆ ಈ ಸಂಕ್ರಾಂತಿವರೆಗೂ ಕಾಯಲೇಬೇಕು. ಪಿ.ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಶೈಲಜಾ ನಾಗ್ ಬಂಡವಾಳ ಹೂಡಿದ್ದಾರೆ.

Comments are closed.