kenduli
portal

ಸಾರಾಗೆ ಹೊಸ ಕಾಂಪಿಟೇಟರ್​​​ ಹುಡುಕಿದ ವೃದ್ಧಿಮಾನ್​ ಸಹಾ..

66

ಟೀಮ್​ ಇಂಡಿಯಾ ವಿಕೆಟ್​ ಕೀಪರ್​​ ವೃದ್ಧಿಮಾನ್​ ಸಹಾ, ಬಾಲಿವುಡ್​ ನಟಿ ಸಾರಾ ಅಲಿ ಖಾನ್​ಗೆ ಹೊಸ ಸ್ಪರ್ಧಿ ಒಬ್ಬರನ್ನ ಹುಡುಕಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡು ಬಾಕ್ಸ್​​​ ಆಫೀಸ್​ನಲ್ಲೀ ಧೋಳೇಬ್ಬಿಸುತ್ತಿರುವ ಸಿಂಬಾ ಚಿತ್ರದ ಹೀರೋಯಿನ್​ ಆಗಿರುವ ಸಾರಾಗೆ, ವೃದ್ಧಿಮಾನ್​ ಸಹಾ ಮಗಳು ಅನ್ವಿ ಸಹಾ, ಪ್ರತಿಸ್ಪರ್ಧಿ​ ಎನ್ನುವಂತೆ ಸ್ಟೆಪ್ಸ್​​ ಹಾಕಿದ್ದಾಳೆ. ಹೊಸ ಹೀರೋಯಿನ್​ಗೆ ಮಗಳು ಅನ್ವಿಯ ಸ್ಪರ್ಧೆ ನೀಡುತ್ತಿದ್ದಾರೆ ಎಂಬಂತೆ, ಮಗಳ ಡ್ಯಾನ್ಸ್​ ವಿಡಿಯೋ ಒಂದನ್ನ ಸಹಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಕಳೆದ ಬಾರಿ ಐಪಿಎಲ್​ ಟೂರ್ನಿ ವೇಳೆ ಗಾಯಗೊಂಡಿದ್ದ ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ವೃದ್ಧಿಮಾನ್​ ಸಹಾ, ವಿಶ್ರಾಂತಿಯಲ್ಲಿದ್ದರು. ಸದ್ಯ ಸಹಾ ಸಂಪೂರ್ಣ ಗುಣಮುಖರಾಗಿದ್ದಾರಾದ್ರು, ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನುವಂತಾಗಿದೆ. ಸದ್ಯ ಸಹಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್​, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ರಿಷಬ್​ ಪಂತ್,​ ಭರ್ಜರಿ ಪರ್ಫಾರ್ಮನ್ಸ್​ ನೀಡುತ್ತಿದ್ದು ಬಹುತೇಕ ತಂಡದ ಖಾಯಂ ಸದಸ್ಯನಾಗಿದ್ದಾರೆ.

Comments are closed.