kenduli
portal

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಾಜಿ ಕ್ರಿಕೆಟಿಗ..!

44

ಭಾರತ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್,​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ಟಿನ್,​ ಸದ್ಯ ಗಂಭೀರ ಸ್ಥಿತಿಯಲ್ಲಿದ್ದಾರೆ. ಟೀಮ್​ ಇಂಡಿಯಾ ಆಟಗಾರ ಯೂಸುಫ್ ಪಠಾಣ್​, ಈ ವಿಷಯವನ್ನ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ಮಾಜಿ ಕ್ರಿಕೆಟರ್​, ಬರೋಡಾ ಮಾಜಿ ಕೋಚ್​ ಬೇಗ ಗುಣಮುಖವಾಗಲಿ ಎಂದು ಬರೆದುಕೊಂಡಿದ್ದಾರೆ. 1999 ರಿಂದ 2001ರ ನಡುವೆ 10 ಪಂದ್ಯಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದ ಜಾಕೋಬ್ ಮಾರ್ಟಿನ್​, 22.57ರ ಸರಾಸರಿಯಲ್ಲಿ 158 ರನ್​ ಕಲೆಹಾಕಿದ್ದಾರೆ. ಬರೋಡಾ ಮೂಲದ ಮಾಜಿ ಕ್ರಿಕೆಟರ್​​, ದೇಸಿ ಕ್ರಿಕೆಟ್​ನಲ್ಲೂ ಕಮಾಲ್​ ಮಾಡಿದ್ದಾರೆ. 1999ರ ರಣಜಿ ಋತುವಿನಲ್ಲಿ 1000 ರನ್​ ಕಲೆಹಾಕಿದ್ದ ಮಾರ್ಟಿನ್​, ಅದೇ ವರ್ಷ ವೆಸ್ಟ್​ ಇಂಡೀಸ್​ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ರು. ದೇಸಿ ಕ್ರಿಕೆಟ್​ನಲ್ಲಿ ಬರೋಡಾ ಮತ್ತು ರೈಲ್ವೇಸ್​ ಪರ ಒಟ್ಟು 138 ಪಂದ್ಯಗಳನ್ನಾಡಿರುವ ಇವರು, 46.65ರ ಸರಾಸರಿಯಲ್ಲಿ 9192 ರನ್​ ಕಲೆಹಾಕಿದ್ದಾರೆ. 2002-03ರ ರಣಜಿ ಋತುವಿನಲ್ಲಿ ರೈಲ್ವೇಸ್​ ಪರ ಕಣಕ್ಕಿಳಿದಿದ್ದ ಮಾರ್ಟಿನ್,​​ ಮರು ವರ್ಷ ತವರು ತಂಡಕ್ಕೆ ಮರಳಿದ್ರು. ಮುಂದೆ 2007-08ರ ರಣಜಿ ಟೂರ್ನಿ ವೇಳೆ ಕೆಲವು ಆಯ್ಕೆ ಸಮಸ್ಯೆಗಳಿಂದಾಗಿ, ಟೂರ್ನಿಯ ನಡುವೆಯೇ ಕ್ರಿಕೆಟ್​ ವೃತ್ತಿ ಬುದುಕಿಗೆ ವಿದಾಯ ಹೇಳಿದ್ದರು. 2016-17ನೇ ರಣಜಿ ಋತವಿನಲ್ಲಿ ಜಾಕೋಬ್ ಮಾರ್ಟಿನ್,​ ಬರೋಡಾ ತಂಡದ ಕೋಚ್​ ಆಗಿದ್ದರು. ಮಾರ್ಟಿನ್​ ಬರೋಡಾ ತಂಡದ ಕ್ಯಾಪ್ಟನ್​ ಆಗಿದ್ದ ಸಮಯದಲ್ಲಿ, ​ ಯೂಸುಫ್ ಪಠಾಣ್ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ರು.

Comments are closed.