kenduli
portal

ಮೇ 12 ರಿಂದ 15ರೊಳಗೆ ನಡೆಯುತ್ತೆ IPL 12ರ ಫೈನಲ್..!

28

ಐಪಿಎಲ್​ 12 ನೇ ಆವೃತ್ತಿ ಟೂರ್ನಿಯ ಫೈನಲ್​ ಪಂದ್ಯದ ನಿರೀಕ್ಷಿತ ಡೇಟ್​ ಅನೌನ್ಸ್​ ಆಗಿದೆ. ಮೇ 12 ರಿಂದ 15 ರೊಳಗೆ ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿ ನೋಡಿಕೊಂಡು, ಐಪಿಎಲ್​ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗ್ತಿದೆ. ಫೆಬ್ರವರಿಯಲ್ಲಿ ಪಂದ್ಯವಾಳಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ನಿನ್ನೆಯಷ್ಟೇ ಐಪಿಎಲ್​ ಆರಂಭದ ದಿನ ಘೋಷಣೆಯಾಗಿತ್ತು. ಇದರೊಂದಿಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿತು. ಈ ವರ್ಷ ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿ ಬೇರೆಡೆಗೆ ಸ್ಥಳಾಂತರವಾಗುತ್ತೆ, ದಕ್ಷಿಣ ಆಫ್ರಿಕಾ ಅಥವಾ ದುಬೈನಲ್ಲಿ ಟೂರ್ನಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದ್ರೆ ಈಗ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆಯೋದು ಕನ್ಫರ್ಮ್​ ಆಗಿದೆ. ಮಾರ್ಚ್​ 23 ರಿಂದ ಪಂದ್ಯಗಳು ಆರಂಭವಾಗಲಿವೆ.  ಐಪಿಎಲ್​ನ ಅಧಿಕೃತ ಟ್ವಿಟ್ಟರ್​ ಅಕೌಂಟ್​ನಲ್ಲಿ ಈ ಬಗ್ಗೆ ಟ್ವೀಟ್ ಮಾಡಲಾಗಿದೆ.

Comments are closed.