kenduli
portal

ಅಖಾಡಕ್ಕಿಳಿಯಲು ಧೋನಿ ರೆಡಿ..!

24

ಇಷ್ಟು ದಿನ ಕ್ರಿಕೆಟ್​ನಿಂದ ದೂರ ಇದ್ದ, ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಮತ್ತೆ ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಲೂ ಜೆರ್ಸಿ ತೊಟ್ಟು, ಬ್ಯಾಟ್​ ಬೀಸಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ತಲುಪಿರುವ ಧೋನಿ, ಇಂದು ಪ್ರಾಕ್ಟೀಸ್​ ಸೆಷನ್​​ನಲ್ಲಿ ಪಾಲ್ಗೊಂಡು ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ್ರು.

ಧೋನಿ ಜೊತೆಗೆ ಓಪನರ್ ಬ್ಯಾಟ್ಸ್​​ಮನ್ ಶಿಖರ್ ಧವನ್, ಅಂಬಟಿ ರಾಯುಡು ಕೂಡ ಬೆವರ ಹರಿಸಿದ್ರು. ಬಿಸಿಸಿಐ ಈ ಪೋಟೊಗಳನ್ನ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದೆ 12 ರಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವಾಡಲಿದೆ. ಈ ಪಂದ್ಯಕ್ಕೆ ಸಿಡ್ನಿ ಅಂಗಳ ಆತಿಥ್ಯವಹಿಸಲಿದೆ.
ಒಂದು ತಿಂಗಳ ಕಾಲ ಫುಲ್ ರೆಸ್ಟ್​​ನಲ್ಲಿದ್ದ ಧೋನಿ, ಫ್ಯಾಮಿಲಿ ಮತ್ತೆ ಫ್ರೆಂಡ್ಸ್​​ ಜೊತೆ ಮಸ್ತ್ ಮಜಾ ಮಾಡಿದ್ರು. ತವರಿನಲ್ಲಿ ವಿಂಡೀಸ್ ವಿರುದ್ಧ ನಡೆದ ಏಕದಿನ ಟಿ20 ಸರಣಿಗಳಲ್ಲಿ ಆಡಿದ್ದ ಧೋನಿ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ರು. ಯಂಗ್ ವಿಕೆಟ್ ಕೀಪರ್ ರಿಷಬ್ ಪಂತ್​ಗೆ ಸ್ಥಾನ ಕಲ್ಪಿಸಲು ತಂಡದಿಂದ ಹೊರಗುಳಿದಿದ್ರು.

Comments are closed.