ಭಾರತದ ವಿರುದ್ಧ ಕತ್ತಿಮಸಿಯುತ್ತಲೇ ಇದೆ ಚೀನಾ… ದೇಶದ ಕಡಲ ಮೇಲೆ ಕಣ್ಣಿಟ್ಟಿದೆ ಡ್ರ್ಯಾಗನ್
ಬೀಜಿಂಗ್: ಭಾರತದ ಕಡಲತೀರದ ಮೇಲೆ ಸದಾ ಕಾಲ ನಿಗಾ ಇರಿಸಲು ಚೀನಾ ಆಧುನಿಕ ಕಡಲತೀರದ ರೆಡಾರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ಈ ರೆಡಾರ್ ಚೀನಾದ ನೌಕಾದಳಕ್ಕೆ ಸಾಕಷ್ಟು ಸಹಕಾರ ನೀಡಲಿದ್ದು, ಕಡಲತೀರವನ್ನು ಸದಾ ಕಣ್ಗಾವಲಿನಲ್ಲಿ ಇರಿಸಲಿದೆ. ಇದರಿಂದ ಶತ್ರುರಾಷ್ಟ್ರದ ಹಡಗು, ವಿಮಾನ ಹಾಗೂ ಕ್ಷಿಪಣಿಗಳು ಬಹುಬೇಗ ಪತ್ತೆಯಾಗಲಿವೆ. ಈಗಿರುವ ತಂತ್ರಜ್ಞಾನಕ್ಕಿಂತಲೂ ಇದು ಸುಧಾರಿತ ತಂತ್ರಜ್ಞಾನ ಎಂದು ಹಾಂಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಚೀನಾದ ಓವರ್ ದಿ ಹಾರಿಜನ್ (OTH) ರೆಡಾರ್ ಪ್ರೋಗ್ರಾಂನಡಿ ಇಂತಹದೊಂದು ಸಂಶೋಧನೆ ಮಾಡಲಾಗಿದ್ದು, ಮಿಲಿಟರಿ ವಿಜ್ಞಾನಿ ಲಿಯು ಯೊಂಗ್ಟಾನ್ ಆವಿಷ್ಕರಿಸಿದ್ದಾರೆ.
ಲಿಯು ತಿಳಿಸಿದಂತೆ, ಈ ರೆಡಾರ್ ಹೆಚ್ಚು ವಿಸ್ತಾರವಾಗಿ ಕಣ್ಗಾವಲು ಇರಿಸಲಿದೆ. ಇಡೀ ಪ್ರದೇಶದ ಸುತ್ತ ಇದು ನಿಗಾ ಇಡಲಿದೆ. ಲಿಯು ತಂಡದ ಸದಸ್ಯರೊಬ್ಬರು ತಿಳಿಸಿರುವಂತೆ, ಸೂಕ್ಷ್ಮ ಪ್ರದೇಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ರೆಡಾರ್ ನೌಕಾದಳಕ್ಕೆ ನೀಡಲಿದೆ. ದಕ್ಷಿಣ ಚೀನಾ ಸಾಗರ, ಭಾರತದ ಸಾಗರ, ಫೆಸಿಫಿಕ್ ಸಾಗರದ ಮೇಲೂ ನಿಗಾ ಇಡಲಿದೆ ಎಂದು ಹೇಳಿದ್ದಾರೆ.
Comments are closed.