kenduli
portal

ಸಾಲಮನ್ನಾ ಯೋಜನೆಯಿಂದ ಯಾರಿಗೂ ಪ್ರಯೋಜನವಾಗಿಲ್ಲ: ಶೆಟ್ಟರ್​

48

ಹುಬ್ಬಳ್ಳಿ: ರಾಜ್ಯ ಸರ್ಕಾರ ಇನ್ನೆಷ್ಟು ದಿನ ಇರುತ್ತೋ ಗೊತ್ತಿಲ್ಲ. ಹೀಗಾಗಿ ಸಾಲಮನ್ನಾದಂತಹ ಜನಪ್ರಿಯ ಯೋಜನೆ ಹೆಸರಿನಲ್ಲಿ‌ ವಂಚನೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿ ಸಾಲಮನ್ನಾ ಮಾಡದೆ ವಂಚನೆ ಮಾಡುತ್ತಿದೆ. ಈವರೆಗೂ ರೈತರಿಗೆ ಸರಿಯಾದ ಸಾಲಮನ್ನಾ ಆಗಿಲ್ಲ. ಇದರ ಮಧ್ಯೆ ಬಡವರ ಬಂಧು ಯೋಜನೆ ಎಂಬ ಒಂದು ಶುದ್ಧ ಸುಳ್ಳು ಯೋಜನೆ ಹರಿಬಿಟ್ಟಿದ್ದಾರೆ. ಬಡವರ ಬಂಧು ಯೋಜನೆಯಲ್ಲಿ ಸಹಕಾರಿ ಸಂಘಗಳಿಂದ ಹಣ ಕೊಡಿಸುತ್ತಿದ್ದಾರೆ. ಸಹಕಾರಿ ಬ್ಯಾಂಕ್​​ಗಳಲ್ಲಿ ಸದಸ್ಯತ್ವ ಇಲ್ಲದವರಿಗೆ ಹಣ ನೀಡಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಸಿಎಂಗೆ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಈಗ ಕೇವಲ 20 ಜನರಿಗೆ ಮಾತ್ರ ಹಣ ನೀಡಿದ್ದಾರೆ. ಈ ಯೋಜನೆ ಯಾರಿಗೂ ಉಪಯೋಗ ಆಗಿಲ್ಲ ಎಂದರು.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಸಿಎಂ ಆದ್ರೆ ಅವರು ನನಗೆ ಬೆಂಬಲ ನೀಡುತ್ತಾರೆ ಎನ್ನುವುದು ಶುದ್ಧ ಸುಳ್ಳು. ನಾನು ರಮೇಶ್​ ಜಾರಕಿಹೊಳಿ ಜೊತೆಗೆ ಚರ್ಚೆ ಮಾಡಿಲ್ಲ. ಅವರನ್ನು ಭೇಟಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಚ್ಚಾಟ ಹೆಚ್ಚಾಗಿದ್ದು, ಅವರೇ ಸರ್ಕಾರವನ್ನು ಕೆಡವಿಕೊಳ್ಳುತ್ತಾರೆ ಎಂದರು.

ವಿಧಾನಸೌಧದ ಬಳಿ ಹಣ ಸಿಕ್ಕ ಪ್ರಕರಣದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಹೆಸರು ಕೇಳಿ ಬಂದಿದೆ. ಹೀಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಸಿಎಂ‌ ಕುಮಾರಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

Comments are closed.