kenduli
portal

ಬೆಂಗಳೂರಿನ ದೇವಾಲಯಗಳಲ್ಲೂ ಮುಂದುವರೆದ ಕಳ್ಳರ ಕೈಚಳಕ

46

ಬೆಂಗಳೂರು: ಮನೆಗಳಿಗೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ದೇವಾಲಯಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕಿಳಿದಿದ್ದಾರೆ.‌ ವಿಜಯನಗರದ ಸರಸ್ವತಿ ಹಾಗೂ ನಗರದ ಆಂಜನೇಯ ದೇವಾಲಯದಲ್ಲಿ 2 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿದ್ದಾರೆ.

ಅಷ್ಟೇ ಅಲ್ಲದೇ ನಿನ್ನೆ ರಾತ್ರಿ ಪಟ್ಟೆಗಾರ ಪಾಳ್ಯದ ಮಾರುತಿ ದೇವಾಲಯದ ಕಿಟಕಿ ಮುರಿದು ಒಳನುಗ್ಗಿ‌ದ ಕಳ್ಳರು ತಮ್ಮ ಕೃತ್ಯಕ್ಕೆ ಮುಂದಾಗಿದ್ದಾರೆ. ದೇವಾಲಯದಿಂದ ಬಂದ ಶಬ್ದ ಗಮನಿಸಿದ‌ ಬೀಟ್ ಪೊಲೀಸರು ದೇವಾಲಯದ ಒಳ ನುಗ್ಗಿದ್ದಾರೆ. ಈ ವೇಳೆ ಖದೀಮರು ‌ಪೊಲೀಸರನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಇನ್ನು ಪೊಲೀಸರ ಸಮಯ ಪ್ರಜ್ಞೆಯಿಂದ ದೇವಾಲಯ ಕಳ್ಳತನ ಯತ್ನ ವಿಫಲವಾಗಿದ್ದು, ಈ ಸಂಬಂಧ ಎರಡು ಪ್ರಕರಣಗಳು ವಿಜಯ ನಗರ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಸ್ಥಳದ ಸಿಸಿಟಿವಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Comments are closed.