kenduli
portal

ಮುಂದುವರೆದ ಬಿಎಸ್‌ ವೈ ಬರ ವೀಕ್ಷಣೆ

26

ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ  ಗ್ರಾಮಗಳಲ್ಲಿ ಇಂದು ಬರ ವೀಕ್ಷಣೆ ನಡೆಸಿದರು. ನಂತರ ಕೊಪ್ಪಳ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಬರ ಪರಿಸ್ಥಿತಿಯ  ಬಗ್ಗೆ ಮಾಹಿತಿ ಪಡೆದರು. ನಂತರ  ಲಿಂಗಸುಗೂರು ತಾಲ್ಲೂಕಿ ಗೆ ಭೇಟಿ ನೀಡಿದ ಬಿಎಸ್‌ ವೈ ಅಲ್ಲಿ ಕುಡಿಯುವನೀರಿನ ಅಭಾವದಿಂದ ಹೈರಾಣ ಹಾಗಿರುವ ಸಾರ್ವಜನಿಕರೊಂದಿಗೆ ಸಮಾಲೊಚನೆ ನಡೆಸಿದರು.

ಕಳೆದ ನಾಲ್ಕು ತಿಂಗಳಿಂದಲೂ ಕುಡಿಯುವ ನೀರಿನ ಅಭಾವದಿಂದ ತತ್ತರಿಸಿರುವ ನಾಗರೀಕರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ‌ಎಸ್.ಯಡಿಯೂರಪ್ಪ ಅವರು ಇಂದು ಸಮಾಲೋಚನೆ ನಡೆಸಿದರು.ಈವರೆಗೆ ಯಾವುದೇ ಅಧಿಕಾರಿಗಳೂ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿಲ್ಲ.ನರೇಗಾ ಯೋಜನೆಯಡಿ ಬಡವರಿಗೆ ಉದ್ಯೋಗ ನೀಡಲೂ ರಾಜ್ಯ ಸರ್ಕಾರ ಮುಂದಾಗಿಲ್ಲ.ಈವರೆಗೆ ಯಾವುದೇ ಅಧಿಕಾರಿಗಳೂ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿಲ್ಲ.ನರೇಗಾ ಯೋಜನೆಯಡಿ ಬಡವರಿಗೆ ಉದ್ಯೋಗ ನೀಡಲೂ ರಾಜ್ಯ ಸರ್ಕಾರ ಮುಂದಾಗಿಲ್ಲ ಎಂದರು ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ಬಿಜೆಪಿಯ ಸ್ಥಳಿಯ ಜನ ಪ್ರತಿನಿಧಿಗಳು ಹಾಗು ಸ್ಥಳೀಯ ಮುಖಂಡರು ಜೊತೆಗಿದ್ದರು.

Comments are closed.