kenduli
portal

ಮಾಲ್ಡೀವ್ಸ್ ಅಧ್ಯಕ್ಷರಿಗೆ ಕ್ರಿಕೆಟ್‌ ಬ್ಯಾಟ್‌ ಉಡುಗೊರೆ ನೀಡಿದ ಪ್ರಧಾನಿ ಮೋದಿ

75

ಮಾಲೆ‌  ಜೂನ್ ೯:-  ಚುನಾವಣೆಯ ಅಭೂತ ಪೂರ್ವ ಗೆಲುವಿನ ನಂತರ ನಿನ್ನೆ ಗುರುವಾಯುರಿನಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದು ಸಾಗರೋತ್ತರ ದೇಶಗಳ ಪ್ರವಾಸವಾಗಿ  ತೆರಳಿದ  ಪ್ರಧಾನಿ ಮೋದಿ ಮಾಲ್ಡೀವ್ಸ್‌ ಗೆ ಭೇಟಿನೀಡಿದರು. ಅಲ್ಲಿನ ಅಧ್ಯಕ್ಷ ಇಬ್ರಾಹಿಂದ ಮೊಹಮದ್‌ ಸೊಲಿಹ್‌ ಅವರಿಗೆ ಕ್ರಿಕೇಟ್‌ ಬ್ಯಾಟ್‌ ಉಡುಗೊರೆಯಾಗಿ ನೀಡಿದರು.

ಕ್ರಿಕೇಟ್‌ ಕ್ರೀಡೆಯ ಪ್ರೇಮಿಯಾದ ನನ್ನ ಗೆಳೆಯ ಮಾಲ್ಡೀವ್ಸ್‌ ಅಧ್ಯಕ್ಷ ಸೋಲಿಹ್‌ ಅವರಿಗೆ‌ ವಿಶ್ವಕಪ್ ನಲ್ಲಿ ಆಡುತ್ತಿರುವ  ಬಾರತೀಯ ತಂಡದ ಸಹಿಯಿರುವ ಕ್ರಿಕೇಟ್‌ ಬ್ಯಾಟ್‌ ನೀಡುತ್ತಿದ್ದೇನೆ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ ಉಭಯ ನಾಯಕರು ದ್ವಿಪಕ್ಷೀಯ  ಸಂಭಂದ ರ ಕುರಿತು ಮಾತುಕತೆ ನಡೆಸಿದ್ದಾರೆ ಇದಕ್ಕು ಮುನ್ನ ನೀಡುವ ನಿಷಾನ್‌ ಇಝದ್ದೀನ್‌ ಪ್ರಶಸ್ತಿಯನ್ನು  ಮೋದಿಯವರಿಗೆ ನೀಡುತ್ತಿರುವುದಾಗಿ ಅಧ್ಯಕ್ಷ ಸೋಹಿಲ್‌ ಪ್ರಕಟಿಸಿದರು.

ಪ್ರಧಾನಿ ಮೋದಿಯವರು ಮಾಲ್ಡೀವ್ಸ್‌ ಸಂಸತ್‌ ಭವನದಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದರು.

Comments are closed.