kenduli
portal

ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್

65

ಬೆಂಗಳೂರು ಜೂನ್‌೯:  ರಾಜಧಾನಿ  ಸೇರಿದಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ನಾಳೆ(ಸೋಮವಾರ) ಬಂದ್ ಆಗಲಿದೆ. ರಾಷ್ಟ್ರೀಯ ಹೆದ್ದಾರಿಯನ್ನು ರೈತರು ಒಂದು ದಿನ ಬಂದ್ ಮಾಡಲಿದ್ದಾರೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೇರಿದಂತೆ ನಾನಾ ಬೇಡಿಕೆ ಮುಂದಿಟ್ಟು ರೈತರು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೀದಿಗಿಳಿಯಲಿ ಸರ್ಕಾರ 2013 ರಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ ರೈತರ ಜಮೀನು ಪಡೆಯುವಾಗ ಅವರ ಅನುಮತಿ ಪಡೆದು ಭೂಸ್ವಾಧೀನ ಮಾಡಬೇಕು. ಅವರಿಗೆ ನೀಡಿದ ಹಣ ತೃಪ್ತಿಕರವಾಗಿರಬೇಕು. ಒಂದು ವೇಳೆ ಆಗದೆ ಇದ್ದರೆ ನ್ಯಾಯಲಯದ ಮೊರೆ ಹೋಗಬಹುದಾಗಿತ್ತು. ಈಗ ಈ ಕಾಯ್ದೆಯನ್ನು ಸರ್ಕಾರ ಬದಲಾಯಿಸಿದೆ. ಸಾಲ ಮನ್ನಾದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ, ಬರಗಾಲದ ಸಮಸ್ಯೆ ನೀಗಿಸುವಲ್ಲಿ  ಸರ್ಕಾರ ವಿಫಲವಾಗಿದೆ  ಈ ಎಲ್ಲಾ ವೈಫಲ್ಯಗಳ  ವಿರುದ್ಧ  ರಸ್ತೆಗೆ ಇಳಿಯುತ್ತಿದ್ದಾನೆ

Comments are closed.