ಸಿಎಂ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಟಿವಿ ಮುಖ್ಯಸ್ಥ ಬಂಧನ
ನವದೆಹಲಿ/ಲಖನೌ,(ಜೂನ್.09):. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅವರ ಮಾನಹಾನಿಯಾಗುವಂಥ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನೋಯ್ಡಾದಲ್ಲಿ ಖಾಸಗಿ ವಾಹಿನಿಯೊಂದರ ಮುಖ್ಯಸ್ಥ ಮತ್ತು ಅದರ ಸಂಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.ಹಾಗು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ
ಮಹಿಳೆಯೋರ್ವಳು ಹಲವು ಮಾಧ್ಯಮಗಳೊಂದಿಗೆ ಮಾತನಾಡುತ್ತ ತಾನು ಯೋಗಿ ಆದಿತ್ಯನಾಥ್ ಅವರಿಗೆ ಮದುವೆ ಪ್ರಪೋಸಲ್ ಕಳಿಸಿದ್ದಾಗಿ ಹೇಳಿದ್ದಾಳೆ. ಇದನ್ನು ಪ್ರಶಾಂತ್ ಕನೋಜಿಯಾ ಎಂಬಾತ ತನ್ನ ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದರು ಈ ಹಿನ್ನೆಲೆಯಲ್ಲಿ ಪ್ರಶಾಂತ್ ವಿರುದ್ಧ ಲಖನೌದ ಪೊಲೀಸ್ ಅಧಿಕಾರಿಯೋರ್ವರು ದೂರು ದಾಖಲಿಸಿದ್ದರು. ಇದು ಮುಖ್ಯಮಂತ್ರಿಗಳ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಖಾಸಗಿ ವಾಹಿನಿಯಲ್ಲಿ ಕೂಡ ಅದೇ ವಿಡಿಯೋದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಯೋಗಿ ಆದಿತ್ಯನಾಥ್ ಗೌರವಕ್ಕೆ ಧಕ್ಕೆ ತಂದ ಹಾಗೂ ಪರವಾನಗಿ ಇಲ್ಲಿದೆ ಚಾನಲ್ ನಡೆಸುತ್ತಿರುವ ಆರೋಪದ ಆಧಾರದ ಮೇಲೆ ಅವರಿಬ್ಬರನ್ನೂ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ
Comments are closed.