kenduli
portal

ಐಎಂಎ ಜುವೆಲ್ಲರಿ ಮಾಲೀಕ ಮನ್ಸೂರ್ ನಾಪತ್ತೆ

25

ಬೆಂಗಳೂರು :- ಸುಮಾರು 2 ಸಾವಿರ ಕೋಟಿ ರೂ. ವಹಿವಾಟನ್ನು ಮನ್ಸೂರ್ ನಡೆಸಿದ್ದಾನೆ. ಹಾಗೆಯೇ ಕಳೆದ 4 ದಿನಗಳಿಂದ ಕಚೇರಿ ಬಾಗಿಲು ಹಾಕಿದ್ದ ಮನ್ಸೂರ್ ಸೋಮವಾರ ಕಚೇರಿ ಬಾಗಿಲು ತೆರೆಯುವುದಾಗಿ ತನ್ನ ಬಳಿ ಹಣ ಹೂಡಿಕೆ ಮಾಡಿದವರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಕಚೇರಿ ತೆರೆಯುವ ಮುನ್ನ ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ. ಸೋಮವಾರ ನಮ್ಮ ಹೂಡಿಕೆ ಹಣ ಸಿಗುತ್ತೆ ಎಂದು ನಂಬಿದ್ದ ಸಾರ್ವಜನಿಕರು ಕಂಗೆಟ್ಟು, ಕಚೇರಿ ಮುಂದೆಯೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಹಣ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಡಿಯೋ ಬಿಡುಗಡೆ ಮಾಡಿ ನಾಪತ್ತೆ ಯಾದ ಮನ್ಸೂರ್…..‌

ಆಡಿಯೊದಲ್ಲಿ ಏನಿದೆ…..?

ಐಎಂಎ ಅಲ್ಲಿ ಹಣ ಹೂಡಿಕೆ ಮಾಡಲು ನಾನು ಜನರ ಬಳಿ ಹಣ ಸಂಗ್ರಹ ಮಾಡಿದ್ದೆ. ಬಳಿಕ ಅದನ್ನು  ಉದ್ಯಮಿಯೊಬ್ಬರಿಗೆ 500 ಕೋಟಿ ಹಾಗೂ ಶಿವಾಜಿನಗರ ಶಾಸಕರಿ ಗೆ 400 ಕೋಟಿ ರೂ. ಸಾಲದ ರೀತಿಯಲ್ಲಿ ಹಣ ನೀಡಿದ್ದೆ. ಆದರೆ ಹಣ ವಾಪಸ್ ಕೊಡುವ ಮನಸ್ಸು ಮಾಡಲೇ ಇಲ್ಲ. ಹಣ ಕೇಳಲು ಹೋದರೆ ಹೆಂಡತಿ ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆ ಭಯಕ್ಕೆ ನಾನು ನನ್ನ ಹೆಂಡತಿ ಮಕ್ಕಳನ್ನು ಹಳ್ಳಿಯೊಂದರಲ್ಲಿ ಬಚ್ಚಿಟ್ಟಿದ್ದೆ. ಆದರೆ ನಾನು ಈಗ ಬದುಕಲು ಸಾಧ್ಯ ಆಗುತ್ತಿಲ್ಲ. ನಾನು ಸಾವನ್ನಪ್ಪುತ್ತೇನೆ ಎಂದು ಆಡಿಯೋ  ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ.

ಈ ಆಡಿಯೋ ಸಿಕ್ಕ ಕೂಡಲೇ ಪೊಲೀಸರು ಮನ್ಸೂರ್ ಮನೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಕಚೇರಿ, ಮನೆಗೆ ಬೀಗ ಜಡಿದು ಮನ್ಸೂರ್ ನಾಪತ್ತೆ ಆಗಿದ್ದು, ನಿಜವಾಗಲೂ ಮನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಪೊಲೀಸರು ಮಾನ್ಸೂರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಣ ಕಳೆದುಕೊಂಡವರು ದೂರುನೀಡಲು ವ್ಯವಸ್ಥೆ ಮಾಡಲಾಗಿದ್ದು ಬೆಂಗಳೂರು ಪೋಲೀಸರು ಮನ್ಸೂರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.