kenduli
portal

ಹೊಸ ದಾಖಲೆ ಬರೆದ ‘ಸಾಹೋ’ ಟೀಸರ್

46

ಬೆಂಗಳೂರು ;- ಪ್ರಭಾಸ್‌ ಅಭಿನಯದ ಸಾಹೋ ಚಿತ್ರದ ಟೀಸರ್‌ ಇದೇ ಗುರುವಾರ ಯೂಟೂಬ್‌ ನಲ್ಲಿ ಬಿಡುಗಡೆಯಾಗಿ  24 ಗಂಟೆಯಲ್ಲಿ ಹೊಸ ದಾಖಲೆ ಬರೆದಿದೆ. ಐದು ಭಾಷೆಯಲ್ಲಿ ಬಿಡುಗಡೆಯಾದ ಈ ಟೀಸರ್‌ ನ್ನು 57 ಮಿಲಿಯನ್ ಜನ ವೀಕ್ಷಸುವ ಮೂಲಕ ಭಾರತದಲ್ಲೇ ಅತಿ ಹೆಚ್ಚು ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಸಾಹೋ….

ಸಾಹೋ ಟೀಸರ್‌ ಗೆ ತೆಲುಗಿನ ಖ್ಯಾತ ನಿರ್ದೇಶಕ ಕೆ ರಾಘವೇಂದ್ರರಾವ್‌ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರ ಪ್ರಶಂಸೆಗೆ ಪಾತ್ರವಾಗಿದೆ ಈ ಚಿತ್ರದ ಟೀಸರ್.‌ 1.29 ನಿಮಿಷದ ಟೀಸರ್‌ ಗೆ ಇಷ್ಟು ಕ್ರೇಜ್‌ ಇದ್ದರೆ ಇನ್ನು ಟ್ರೈಲರ್‌ ಗೆ ಎಷ್ಟು   ವೀಕ್ಷಣೆ ಬರುತ್ತೋ ಕಾದು ನೋಡಬೇಕು.

ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ಸುಜಿತ್ ನಿರ್ದೇಶಿರುವ ಈ ಸಿನಿಮಾದಲ್ಲಿ. ಬಾಲಿವುಡ್ ತಾರೆ ಶ್ರದ್ಧಾ ಕಪೂರ್‌ ಹೀರೋಯಿನ್. ಸುಮಾರು  300 ಕೋಟಿ ಬಜೆಟ್‌ನಲ್ಲಿ ಯುವಿ ಕ್ರಿಯೇಶನ್‌ ನಿರ್ಮಾಣ ಮಾಡುತ್ತಿದ್ದು ಆಗಸ್ಟ್‌ ೧೫ ಕ್ಕೆ ಬಿಡುಗಡೆಯಾಗಲಿದೆ.

Comments are closed.