kenduli
portal

ಬರ ಪರಿಸ್ಥಿತಿ- ರಾಜ್ಯಕ್ಕೆ ನೆರವು ನೀಡಲು ಪ್ರಧಾನಿಗೆ ಸಿಎಂ ಮನವಿ

56

ಬೆಂಗಳೂರು:- ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಈ ವರ್ಷವೂ ಮಳೆಯ ಕೊರತ ಎದುರಾಗಿದೆ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಮುಂದಾಗಬೇಕು ಎಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಕೋರಿದರು.

ನವ ದೆಹಲಿಯಲ್ಲಿ  ನೀತಿ ಆಯೋಗದ ಸಭೆಗೂ ಮುನ್ನ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡನೇ ಭಾರಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮೋದಿಗೆ ಅಭಿನಂದನೆ ಸಲ್ಲಿಸಿದರು.

ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ಮಳೆ ಕೊರತೆ,ನರೇಗಾ ಯೋಜನೆಯಿಂದ ರಾಜ್ಯಕ್ಕೆ ಬಿಡುಗಡೆಯಾಗ ಬೇಕಾಗಿರುವ 1950 ಕೋಟಿ ಹಣ ಬಿಡುಗಡೆಗೆ ಮನವಿ ಮಾಡಿದರು ಹಾಗೂ ಸಾಲ ಮನ್ನಾ ಯೋಜನೆ ಯಶಸ್ವಿ ಅನುಷ್ಠಾನ ಕುರಿತು ಚರ್ಚಿಸಿದರು.

Comments are closed.