kenduli
portal

ಉಪ್ಪಿ ಅಭಿಮಾನಿಗಳಿಗೆ ಇಷ್ಟವಾಗು ʼಐ ಲವ್ ಯು

31

ಬೆಂಗಳೂರು ಜೂನ್‌ ೧೬:- ಉಪೇಂದ್ರ  ʼಉಪ್ಪಿ ಐ ಲವ್‌ ಯುʼ ಚಿತ್ರದ ಮೂಲಕ ಗ್ರಾಂಡ್‌ ಎಂಟ್ರಿ ಕೊಟ್ಟಿದಾರೆ. ಉಪೇಂದ್ರ ಮತ್ತೆ ಬಾ ಚಿತ್ರದ ನಂತರ ಪ್ರಜಾಕೀಯದಲ್ಲೇ ಹೆಚ್ಚುಒತ್ತು ಕೊಟ್ಟದ್ದರು. ಎರಡು ವರ್ಷಗಳಿಂದ ತೆರೆಮೇಲೆ ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಉಪ್ಪಿ ಐ ಲವ್‌ ಯು ಎನ್ನುತ್ತ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಉಪ್ಪಿ  ಐ ಲವ್‌ ಯು  ಚಿತ್ರ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಇದೇ ಜೂ.14 ರಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಬಹು ಕಾಲದ ನಂತರ ಥಿಯೇಟರ್‌ಗೆ ಬಂದಿರುವ ಉಪ್ಪಿಯನ್ನು ಫ್ಯಾನ್ಸ್‌  ಅತ್ಯಂತ ಅಭಿಮಾನದಿಂದ ಸ್ವಾಗತಿಸಿದ್ದಾರೆ. ಉಪ್ಪಿಯ ಈ ಚಿತ್ರ ಅಭಿಮಾನಿಗಳಿಗೆ  ಇಷ್ಟವಾಗುತ್ತೆ. ಸಾಮನ್ಯ ಪ್ರೇಕ್ಷಕ ಚಿತ್ರ ಇಷ್ಟ ಪಡುತ್ತಾನೊ ಇಲ್ಲವೊ ಅನ್ನುದಕ್ಕೆ ಸ್ವಲ್ಪ ದಿನ ಕಾಯಬೇಕು..

ಸಕ್ಸಸ್‌ಮೀಟ್‌

ಚಿತ್ರ ದ ಸಕ್ಸಸ್‌ಮೀಟ್‌ ನಲ್ಲಿ  ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್‌. ಚಂದ್ರು, ಐ ಲವ್‌ ಯು ಚಿತ್ರವನ್ನು ವಿತರಕರು ಉತ್ತಮ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ. ಬಿಡುಗಡೆಗೂ ಮೊದಲೇ ಹೂಡಿದ ಹಣ ವಾಪಾಸ್‌ ಬಂದಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಹೌಸ್‌ಫ‌ುಲ್‌ ಕಲೆಕ್ಷನ್ಸ್‌ ಪಡೆದುಕೊಳ್ಳುತ್ತಿದೆ. ಚಿತ್ರವನ್ನು ನೋಡಿ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರವನ್ನು ಕೊಂಡುಕೊಂಡಿರುವುದಕ್ಕೆ ವಿತರಕರು ಕೂಡ ಖುಷಿಯಾಗಿದ್ದಾರೆ ಎಂದರು.

ಚಿತ್ರದ  ಬಗ್ಗೆ ನಟ ಉಪೇಂದ್ರ ಮಾತನಾಡುತ್ತಾ  ನಾನು ಕೂಡ ಡಬ್ಬಿಂಗ್‌ ಆದ ಮೇಲೆ ಐ ಲವ್‌ ಯು ಸಿನಿಮಾ ನೋಡಿರಲಿಲ್ಲ. ರಿಲೀಸ್‌ ಆದ ಮೇಲೆ ಎಲ್ಲರ ಜೊತೆ ನೋಡಿದೆ. ಆಡಿಯನ್ಸ್‌ ಕಡೆಯಿಂದ ಬರುತ್ತಿರುವ ರೆಸ್ಪಾನ್ಸ್‌ ನೋಡಿ ಖುಷಿಯಾಯ್ತು, ಅಣ್ಣಾವ್ರು ಹೇಳುತ್ತಿದ್ದಂತೆ ಸಕ್ಸಸ್‌ ಅನ್ನೋದು ಚಿದಂಬರ ರಹಸ್ಯ. ಆದ್ರೆ ಒಂದು ಒಳ್ಳೆಯ ಸಿನಿಮಾ ಆಗೋದಕ್ಕೆ, ಸಕ್ಸಸ್‌ ಆಗೋದಕ್ಕೆ ಎಲ್ಲರ ಪರಿಶ್ರಮ ಅಂತೂ ಇದ್ದೇ ಇರುತ್ತದೆ. ಐ ಲವ್‌ ಯು ಸಿನಿಮಾದ ಸಬ್ಜೆಕ್ಟ್ ಮೇಲೆ ನಂಬಿಕೆ ಇತ್ತು. ಹಾಗಾಗಿ ಎಲ್ಲರೂ ಅದರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದಾರೆ. ಈಗ ಎಲ್ಲರ ಪರಿಶ್ರಮಕ್ಕೆ ಫ‌ಲ ಸಕ್ಕಿದೆ  ಎಂದರು.

Comments are closed.