kenduli
portal

ಕೆರೆಗೆ ನೀರು ಹರಿಸಲು, “ಬರʼದನಾಡಲ್ಲಿ ಪಾದಯಾತ್ರೆ

118

ವೈ.ಎನ್. ಹೊಸ ಕೋಟೆ ಜೂನ್‌ ೧೬:-  ಪ್ರತಿ ಬಾರಿ ತೀವ್ರ ಬರಗಾಲ ತುತ್ತಾಗುತ್ತಿರುವ ಪಾವಗಡ ತಾಲೂಕಿನ ಎಲ್ಲಾ ಕೆರೆಗಳಿಗೆ ನದಿಯ ನೀರಿನ್ನು  ಹರಿಸಲು ಆಗ್ರಹಿಸಿ ಕೆರೆಗಳ ಸಂಘ ಇಂದು ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು.

ವೈ ಎನ್‌ ಹೊಸಕೋಟೆ ಹೋಬಳಿ ಜೋಡಿ ಅಚ್ಚಮ್ಮನಹಳ್ಳಿ ಯಿಂದ – ತಾಲ್ಲೂಕು ಕೇಂದ್ರ ಪಾವಗಡ ವರಗೆ ಪಾದ ಯಾತ್ರೆ ನಡೆಯುತ್ತಿದ್ದು ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲ್ಲಿ ಸಂಜೆಯ ವರೆಗು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘಟಕರು ತಳಿಸಿದರು.

ನೆರೆಯ ಆಂಧ್ರ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ವೇಗವಾಗಿ ಮಾಡುತ್ತಿದೆ, ರಾಜ್ಯ ಸರ್ಕಾರವೂ ನೆರೆಯ ಆಂಧ್ರ ಮಾದರಿಯಲ್ಲೆ ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ ಮಾಡಲು ಒತ್ತಾಯಿಸಿ ” ಕೆರೆ ತುಂಬಿಸಿʼ ಹೋರಾಟ ಅಭಿಯಾನವನ್ನು ಪಾವಗಡ ತಾಲ್ಲೂಕು ಕೆರೆಗಳ ಸಂಘ ಹಮ್ಮಿಕೊಂಡಿದೆ.

ಮೊದಲ ಹಂತವಾಗಿ ತಾಲ್ಲೂಕಿನ ಪ್ರತಿ ಹಳ್ಳಿ ಗಳಿಗೂ ಹೋಗಿ ಜಾಗೃತಿ ಮುಡಿಸು ಕೆಲಸ ಮಾಡಿದ್ದೇವೆ ಎರಡನೆ ಹಂತವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು, ಭದ್ರಾ ಮೇಲ್ದಂಡೆಯಾಗಲಿ ಅಥವಾ ಎತ್ತಿನ ಹೊಳೆಯಿಂದಾಗಲಿ ಶೀಘ್ರವೇ ಕೆರೆಗಳಿಗೆ ನೀರು ತುಂಬಿಸಿ ಎಂಬುದು ನಮ್ಮ ಒತ್ತಾಯ, ಸರ್ಕಾರ ನಿದ್ರೆಯಿಂದ ಮೇಲೆ ಹೇಳದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕ ಲಿಂಗಪ್ಪ ತಿಳಿಸಿದರು.

ಪಾವಗಡ ಗಡಿ ಪ್ರದೇಶವಾಗಿದ್ದು ತೀರಾ ಹಿಂದುಳಿದ ತಾಲ್ಲೂಕಾಗಿದೆ, ಪ್ರತಿ ಬಾರಿ ಬರಕ್ಕೆ ತುತ್ತಾಗುತ್ತಿದ್ದು ಇಲ್ಲಿನ ರೈತರ ಬದಕು ದುಸ್ತರವಾಗಿದೆ. ತಾಲ್ಲೂಕಿನ ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಪಾವಗಡ ಬರದ ನಾಡು- ಹಿಂದುಳಿದ ನಾಡಾಗಲು ಕಾರಣವಾಗಿದೆ. ತಾಲ್ಲೂಕಿನ ಅಭಿವೃದ್ಧಿ ಗೆ ಜನಜಾಗೃತಿಯೊಂದೆ ಮದ್ದು ಈ ಮೂಲಕ ವಷ್ಠೆ  ಅಭಿವೃದ್ದಿ ಸಾದ್ಯ ಎಂಬುದು ಸಂಘಟಕರವಾದ.

Comments are closed.