kenduli
portal

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ

24

ನವದೆಹಲಿ: ಕಳೆದ ಒಂದು ವಾರದಿಂದಲೂ ನಿರಂತರವಾಗಿ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಸಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ದೇಶದ ಪ್ರಮುಖ ನಗರಗಳ ಭಾನುವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ.

ಲೀಟರ್‌ಗೆ 12 – 14 ಪೈಸೆ ಕಡಿಮೆಯಾಗಿದ್ದರೆ, ಇತ್ತ ಡೀಸೆಲ್‌ಗೆ 32 – 34 ಪೈಸೆ ಕಡಿಮೆಯಾಗಿದೆ. ರಾಜಧಾನಿ ಬೆಂಗಳೂರು ಕೂಡ ಇಂಧನ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು, ಪೆಟ್ರೋಲ್‌ ಲೀಟರ್‌ಗೆ 17 ಪೈಸೆ ಕಡಿಮೆಯಾಗಿ 72.94 ರೂ.ರಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ ಇಳಿಕೆಯಾಗಿದ್ದು, ಲೀಟರ್‌ ಡೀಸೆಲ್‌ಗೆ 66.67 ರೂ.ಗಳಷ್ಟಿದ್ದು, ನಿನ್ನೆಗೆ ಹೋಲಿಸಿದರೆ 16 ಪೈಸೆ ಕಡಿಮೆಯಾಗಿದೆ

Comments are closed.