kenduli
portal

ಸಂಸತ್ ನಲ್ಲಿ ಮೊಳಗಿದ ಕನ್ನಡ ಕಹಳೆ…!

30

ನವದೆಹಲಿ ಜೂನ್‌ ೧೭:- ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಸಂಸತ್‌ ಅಧಿವೇಶ ಇಂದು ಶುರುವಾಯಿತು, ನಿಯಮಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಸಂಸತ್‌ ಸದಸ್ಯರಾಗಿ ಮೊದಲು ಪ್ರಮಾಣ ವಚನ ಸ್ವೀಕರಿಸಿದರು,ಹಂಗಾಮಿ ಸ್ಪೀಕರ್‌ ವಿರೇಂದ್ರಕುಮಾರ್‌ ನೂತನ ಸಂಸದರಿಗೆ ಪ್ರಮಾಣ ವಚನ ಬೋದಿಸಿದರು.

ಹದಿನೇಳನೇ ಲೋಕಸಭೆಗೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು, ಕನ್ನಡ ದಲ್ಲೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ  ಕನ್ನಡಾಭಿಮಾನ ಮೆರಿದಿದ್ದಾರೆ.

ಬೆಂಗಳೂರು ಉತ್ತರದಿಂದ  ಮೂರನೇ ಬಾರಿಗೆ ಆಯ್ಕೆಯಾಗಿರುವ  ಕೇಂದ್ರ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ‌ಮೊದಲಿಗೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮಾದರಿಯಾದರು.ನಂತರ ಧಾರವಾಡ ಸಂಸದ ಮತ್ತು ಸಚಿವ ಪ್ರಹ್ಲಾದ್ ಜೋಷಿ,, ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌,ಪ್ರತಾಪ್‌ ಸಿಂಹ,ತೇಜಸ್ವಿಸೂರ್ಯ, ಸೇರಿದಂತೆ ರಾಜ್ಯದ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಠಿಸಿದರು.

Comments are closed.