ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕಾರ
ಬೆಂಗಳೂರು ಜೂನ್ ೧೭;- ಬೆಂಗಳೂರು ನಗರದ ನೂತನ ಕಮೀಷನರ್ಆಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರದಂಡವನ್ನು ಅಲೋಕ್ ಕುಮಾರ್ ಗೆ ನಿರ್ಗಮಿತ ಕಮೀಷನರ್ ಸುನೀಲ್ ಕುಮಾರ್ ಹಸ್ತಾಂತರಿಸಿದರು.
. ನಗರ ಪೊಲೀಸ್ ಆಯುಕ್ತರಾಗಿದ್ದ ಸುನೀಲ್ ಕುಮಾರ್ರನ್ನು ನೇಮಕಾತಿ ವಿಭಾಗಕ್ಕೆ ವರ್ಗಾಯಿಸಿದ್ದ ಸರ್ಕಾರ, ಅವರ ಸ್ಥಾನಕ್ಕೆ ಅಲೋಕ್ ಕುಮಾರ್ರನ್ನು ನೇಮಿಸಿತ್ತು. ಅಲೋಕ್ ಕುಮಾರ್ ಬೆಂಗಳೂರು ನಗರದ 34 ನೇ ಪೊಲೀಸ್ ಕಮೀಷನರ್ ಆಗಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲೋಕ್ ಕುಮಾರ್, ಸಹೋದ್ಯೋಗಿಗಳ ಸಹಕಾರದಿಂದ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಎಂದರು.
Comments are closed.