kenduli
portal

ಬೆಂಗಳೂರಿನಲ್ಲಿ ವೋಲ್ವೊಗೆ ಬ್ರೇಕ್……?

45

ಬೆಂಗಳೂರಿನಲ್ಲಿ ವೋಲ್ವೊಗೆ ಬ್ರೇಕ್……?

ಬೆಂಗಳೂರ ಜೂ ೧೯]:  ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಲು ಗಂಭೀರ  ಚಿಂತನೆಗಳು ನಡೆದಿವೆ ಸತತವಾಗಿ  ಭಾರಿ ನಷ್ಠ ಅನುಭವಿಸುತ್ತಿರು ಹಿನ್ನೆಲೆಯಲ್ಲಿ  ಕ್ರಮ ಕೈಗೊಳ್ಳಲು ಮುಂದಾಗಿದೆ ಸರ್ಕಾರ.

ಪ್ರವಾಸ್‌ ಕಾರ್ಯಕ್ರಮದ  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ಬಿಎಂಟಿಸಿ ವೋಲ್ವೊ ಬಸ್‌ ಗಳಿಂದ ನಿಗಮಕ್ಕೆ ಪ್ರತಿ ವರ್ಷ ಸುಮಾರು ೮೫ ರಿಂದ ೯೦ ಕೋಟಿ ನಷ್ಟ ಬರುತ್ತಿದೆ ಹಾಗು ಬಿಎಂಟಿಸಿ ನಿಗಮದಲ್ಲಿ ಪ್ರತಿ ವರ್ಷ ನಷ್ಟದ ಪ್ರಮಾಣ ಏರಿಕೆ ಯಾಗುತ್ತಿದ್ದು,ಇದರ ದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚಿಸಿದ್ದು ವರದಿ ಬಂದ ನಂತರ ಸೂಕ್ತ  ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಎಂಟಿಸಿ ವೋಲ್ವೋ ಬಸ್‌ ಕೆಸ್ಸಾರ್ಟಿಸಿಗೆ  ಹಸ್ತಾಂತರ…?

ವೋಲ್ವೊ ಬಸ್ ಗಳು ಪ್ರತಿದಿನ ೩೦೦ ಕಿಲೊಮೀಟರ್‌ ಸಂಚರಿಸಿದರೆ ಮಾತ್ರ ನಷ್ಟ ಬರುವುದಿಲ್ಲ ಆದರೆ ಬೆಂಗಳೂರಿನ ವಾಹನ ದಟ್ಟಣೆಯಿಂದ ಅದು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಎಲ್ಲಾ ವೋಲ್ವೋ ಬಸ್‌ ಗಳು ನಷ್ಟ ಅನುಭವಿಸುವಂತಾಗಿದೆ ಆದ್ದರಿಂದ ಕೆಎಸ್‌ ಆರ್‌ ಟಿಸಿ ಗೆ ಹಸ್ತಾಂತರಿಸಿ, ಬೆಂಗಳೂರಿಗೆ ಹತ್ತಿರ ಇರುವ ನಗರಗಳಾದ ತುಮಕೂರು,ಮೈಸೂರು,ಕೋಲಾರ ಪಟ್ಟಣಗಳಿಗೆ ಈ ವೋಲ್ವೊ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

Comments are closed.