kenduli
portal

ಬಿಬಿಎಂಪಿ ಯ ನಾಗಪುರ ವಾಡ್೯-67 ರಲ್ಲಿ ಪಾಲಿಕೆಯ ಕಲ್ಯಾಣ ಯೋಜನೆಯ ಸಾಧನ- ಸಲಕರಣೆ ವಿತರಣೆ

55

ಬೆಂಗಳೂರು :- ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ನೂತನ ಒಂಟಿ ಮನೆಗಳ ಕೀ ವಿತರಣೆ  ಮತ್ತು ಸ್ವಯಂ ಉದ್ಯೋಗ ಮಹಿಳೆಯರಿಗೆ ಹೊಲಿಗೆ ಯಂತ್ರ ,ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ,ಅಂಗವಿಕರಲರಿಗೆ ತ್ರಿಚಕ್ರ ವಾಹನ ಮತ್ತು ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಬ್ಯಾಗ್ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆಯನ್ನು ಅದಿಚುಂಚನ ಗಿರಿ ಶಾಖ ಮಠದ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀರವರು ,ಶಾಸಕರಾದ ಗೋಪಾಲಯ್ಯ ,ಮಾಜಿ ಸಚಿವರು ,ವಿಧಾನಪರಿಷತ್ತು ಸದಸ್ಯರಾದ ಹೆಚ್.ಎಂ.ರೇವಣ್ಣ ಮತ್ತು ಉಪ ಮಹಾಪೌರರಾದ ಭದ್ರೇಗೌಡರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಶ್ರೀ ಶ್ರೀ ಶ್ರೀ ಸೌಮ್ಯನಾಥ ಮಹಾಸ್ವಾಮಿಜೀರವರು ಮಾತನಾಡಿ ಜನರಿಗೆ ಶಿಕ್ಷಣ ಆಶ್ರಯ ,ನೀರು ,ಉದ್ಯೋಗ ಅತಿ ಅವ್ಯಶಕತೆ ಇದೆ .ಬಿ.ಬಿ.ಎಂ.ಪಿ.ವತಿಯಿಂದ ಉತ್ತಮ ಮನೆ ನಿರ್ಮಾಣ ಮಾಡಿದ್ದಾರೆ .ಜನಪ್ರತಿ ನಿಧಿಗಳು ಉತ್ತಮ ಕಾರ್ಯ ಮಾಡಿದರೆ ಜನರು ಅವರನ್ನ ನೆನಪಿನಲ್ಲಿ ಇಟ್ಟಿಕೊಳ್ಳುತ್ತಾರೆ .ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು .ವಿಧಾನಪರಿಷತ್ತು ಸದಸ್ಯರಾದ ಹೆಚ್.ಎಂ.ರೇವಣ್ಣರವರು ಮಾತನಾಡಿ ರಾಜಕೀಯ ನಿಂತ ನೀರಲ್ಲ ,ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು .ಅಭಿವೃದ್ದಿ ಕಾರ್ಯಗಳಿಗೆ ಜಾತಿ ,ಮತ ,ಪಕ್ಷ ಭೇದ ಮರೆತು ಸಹಕಾರ ನೀಡಬೇಕು ಎಂದು ಹೇಳಿದರು .

ಮಾನ್ಯ ಶಾಸಕರಾದ ಶ್ರೀ. ಗೋಪಾಲಯ್ಯರವರು ಮಾತನಾಡುತ್ತಾ ಮಹಾಲಕ್ಷ್ಮೀಲೇಜೌಟ್ ಏಳು ವಾರ್ಡ್ ಗಳಲ್ಲಿ ಸಾವಿರ ಲ್ಯಾಪ್ ಟಾಪ್ ವಿತರಿಸಲಾಯಿತು ಮತ್ತು ಬಸ್ ಸಂಚಾರಿಸುವ ರಸ್ತೆಗಳಿಗೆ 170ಕೋಟಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ,68ಕೋಟಿ ವೆಚ್ಚದಲ್ಲಿ ರಿಂಗ್ ರೋಡ್ ನಿಂದ  ಫಸ್ಟ್ ಬ್ಲಾಕ್ ವರೆಗೆ ರಸ್ತೆ ನಿರ್ಮಾಣವಾಗಲಿದೆ ಇದರಿಂದ ಸಾವಿರಾರು ವಾಹನಗಳು ಸುಗಮ ಸಂಚಾರಕ್ಕೆ ಆನುಕೂಲವಾಗಲಿದೆ ಎಂದರು .

ಮಾನ್ಯ ಉಪ ಮಹಾಪೌರರಾದ ಭದ್ರೇಗೌಡರು ಮಾತನಾಡಿ ಉಪ ಮಹಾಪೌರರ ಅನುದಾನದಲ್ಲಿ ಎರಡುವರೆ ಕೋಟಿ ರೂಗಳನ್ನು ಲ್ಯಾಪ್ ಟಾಪ್ ವಿತರಣೆಗಾಗಿ ಆನುಮೋದನೆ ನೀಡಲಾಗಿದೆ .ಕಾಲೇಜು ವಿದ್ಯಾರ್ಥಿಗಳು ಮಾಹಿತಿ ,ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅನುಕೂಲವಾಗಲಿ ಎಂದರು. 167 ಒಂಟಿ ಮನೆ ನಿರ್ಮಿಸಲಾಗಿದೆ ಆರ್ಥಿಕವಾಗಿ ಹಿಂದುಳಿದವರು ಸುಸಜ್ಜಿತ ಮನೆಯಲ್ಲಿ ವಾಸ ಮಾಡಲಿ ಮತ್ತು ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಿಸಲಾಗುತ್ತಿದೆ ಎಂದು ಹೇಳಿದರು.

Comments are closed.