kenduli
portal

ಜಿಎಸ್ ಟಿ ನಷ್ಟ ಪರಿಹಾರ ಇನ್ನು ಐದು ವರ್ಷ ಕಾಲ ವಿಸ್ತರಿಸಬೇಕು- ಕುಮಾರಸ್ವಾಮಿ

28

ಬೆಂಗಳೂರು ಜೂನ್‌ ೨೫:- ನಗರದ ಖಾಸಗಿ ಹೊಟಲ್‌ ನಲ್ಲಿ ನಡೆದ ೧೫ ನೇ ಹಣಕಾಸು ಆಯೋಗ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ.ಸರಕು ಮತ್ತು ಸೇವಾ ತೆರಿಗೆ ಜಿಎಸ್‌ ಟಿ ಯಡಿ ರಾಜ್ಯಗಳಿಗೆ ಆಗುತ್ತಿರುವ ನಷ್ಟವನ್ನು ಐದು ವರ್ಷಗಳ ಕಾಲ ಅಥವಾ ೨೦೨೨ ರವರೆಗೆ ವಿಸ್ತರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

೧೪ ನೇ ಹಣಕಾಸು ಆಯೋಗದಲ್ಲಿ ರಾಜ್ಯಗಳಿಗೆ ಶೇ೩೨ ರಿಂದ  ಶೇ ೪೨ ಕ್ಕೆ ಸಂಪನ್ಮೂಲ ಹೆಚ್ಚಿಸಲಾಗಿತ್ತು. ಆದರೆ ಕೇಂದ್ರದ ಯೋಜನೆಗಳಿಗೆ ನೀಡುತ್ತಿದ್ದ ಅನುದಾನದಲ್ಲಿ  ಕಡಿತ ಮಾಡಲಾಗಿತ್ತು ಎಂದು ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಕರ್ನಾಟಕಕ್ಕೆ ನೀಡುವ ಅನುದಾನದಲ್ಲಿ  ತಾರತಮ್ಯ ಮಾಡಲಾಗುತ್ತಿದೆ, ಸತತ ಬರಪರಿಸ್ಥಿತಿ ಎದುರಿಸುತ್ತಿರುವ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದರು.

Comments are closed.