kenduli
portal

ಮೋದಿಗೆ ವೋಟ್, ಕೆಲಸಕ್ಕೆ ನಾನು ಬೇಕಾ…? ಕುಮಾರಸ್ವಾಮಿ

37

ರಾಯಚೂರ ಜೂನ್‌ ೨೬ :- ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದರು

 ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಕೆಲಸದಿಂದ ತೆಗೆದ
ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಬಸ್ ತಡೆದು ಮತ್ತೆ ಉದ್ಯೋಗ ನೀಡುವಂತೆ ಪ್ರೊಟೆಸ್ಟ್ ಮಾಡಿದರು, ಕಾರ್ಮಿಕರ ನಡೆಗೆ ಸಿಎಂ ಗರಂ ಆಗಿ ಕುಳಿತ ಸೀಟ್‌ನಿಂದ ಎದ್ದು ಆಕ್ರೋಶ ಹೊರಹಾಕಿದರು.

ಬಸ್ ಅನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವೋಟ್ ಮೋದಿಗೆ ಹಾಕ್ತೀರಾ? ಕೆಲಸ ಮಾಡಲಿಕ್ಕೆ ನಾನು ಬೇಕಾ?  ನಿಮಗೆ ಲಾಟಿ ಚಾರ್ಜ್‌ ಮಾಡಬೇಕು ಎಂದು ಗರಂ ಆದರು

ಮುಖ್ಯಮಂತ್ರಿ ಗಳ ಈ ನಡವಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸಿ ಟಿ ರವಿ ಸೇರಿದಂತೆ ಹಲವು ಮುಖಂಡರು ತೀವ್ರವಾಗಿ ಖಂಡಿಸಿದರು.

Comments are closed.